ಬೆಂಗಳೂರು: ಆಭರಣ ಖರೀದಿ ವಿಚಾರದಲ್ಲಿ ಪತಿ-ಪತ್ನಿಯರ ನಡುವೆ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಸಿದ್ಧಾಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಬಾಡಿಗೆ ನೀಡಲೆಂದು ಮನೆಯಲ್ಲಿ ಎತ್ತಿಟ್ಟಿದ್ದ ಹಣವನ್ನು ಪತ್ನಿ ಆಭರಣ ಖರೀದಿಗೆ ಬಳಸಿದ್ದಳು. ಇದು ಪತಿಯ ಸಿಟ್ಟಿಗೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಪತಿ ಪತ್ನಿಯ ಜೊತೆ ಜಗಳವಾಡಿದ್ದ.ಈ ಸಂದರ್ಭದಲ್ಲಿ ಪತಿ, ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.