ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯ ಪ್ರಿಯಕರನನ್ನು ಪತಿಯೇ ಹತ್ಯೆ ಮಾಡಿದ ಘಟನೆ ಬ್ಯಾಡರಹಳ್ಳಿಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 26 ವರ್ಷದ ಶಿವಕುಮಾರ್ ಎಂಬಾತ ಹತ್ಯೆಗೀಡಾದಾತ. 31 ವರ್ಷದ ಭರತ್ ಆರೋಪಿ. ಈತನ ಪತ್ನಿ ವಿನುತಾ ಮತ್ತು ಶಿವಕುಮಾರ್ ಅಕ್ರಮ ಸಂಬಂಧ ಹೊಂದಿದ್ದರು. ಎಂಟು ವರ್ಷಗಳ ಹಿಂದೆ ಭರತ್-ವಿನುತಾ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳೂ ಇದ್ದಾರೆ.ಹತ್ಯೆಗೀಡಾದ ಶಿವಕುಮಾರ್ ವಿನುತಾ ಊರಿನವನು. ಕೆಲಸ ಹುಡುಕಿಕೊಂಡು ಬಂದಿದ್ದ ಶಿವಕುಮಾರ್ ವಿನುತಾ ಮನೆಯಲ್ಲಿ ಉಳಿದುಕೊಂಡಿದ್ದ.