ಮಂಡ್ಯ : ಮಳವಳ್ಳಿ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದ್ದ ಮಹಿಳೆಯ ನಿಗೂಢ ಹತ್ಯೆಯ ರಹಸ್ಯ ವಾರದ ಬಳಿಕ ಬಯಲಾಗಿದೆ. ಪತ್ನಿಯನ್ನು ಪತಿರಾಯನೇ ಕೊಂದು, ವಿಷ ಸೇವಿಸಿ ತಾನೇ ಆಸ್ಪತ್ರೆ ಸೇರಿದ್ದು ಪ್ರಕರಣದ ರಹಸ್ಯಯವಾಗಿದೆ. 23 ವರ್ಷದ ಸಂಧ್ಯಾ ಗಂಡನಿಂದಲೇ ಕೊಲೆಯಾಗಿರುವವರು. ಪ್ರಕರಣ ಏನೆಂದರೆ ಒಂದೂವರೆ ವರ್ಷದ ಹಿಂದಷ್ಟೇ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಎಂಬಾತನನ್ನು ಸಂಧ್ಯಾ ಮದುವೆಯಾಗಿದ್ದರು. ದಾಂಪತ್ಯದಲ್ಲಿ ಬಿರುಕು ಸೃಷ್ಟಿಯಾಗಿ ಇತ್ತೀಚೆಗೆ ಗಂಡ ಮತ್ತು ಹೆಂಡತಿ ದೂರವಾಗಿದ್ದರು.