ತನ್ನ ಪತಿ ಬೇರೊಬ್ಬಳ ಜೊತೆ ಅನೈತಿಕ ಹೊಂದಿರೋದನ್ನು ಕಂಡು ಪತ್ನಿಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ. ಐಟಿ ಉದ್ಯೋಗಿಯಾಗಿರೋ ಪಾವನಿ ಹಾಗೂ ಆಕೆಯ ಪತಿ ಸುಕೀತ್ ಐದಾರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಪತಿ ಸುಕೀತ್ ಬೇರೊಬ್ಬಳ ಜೊತೆಗೆ ಲವ್ವಿ ಡವ್ವಿ ಹಾಗೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಇಷ್ಟು ಸಾಲದೆಂಬಂತೆ ಪತ್ನಿ ಪಾವನಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಪತಿನ ಅಕ್ರಮ ಸಂಬಂಧದಿಂದ ಬೇಸತ್ತು ಪಾವನಿ, ಹೈದರಾಬಾದ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.