ಕಿಸ್ ಮಾಡ್ತೀನಿ ಅಂತ ಪತ್ನಿಯ ನಾಲಿಗೆ ಕಟ್ ಮಾಡಿದ ಗಂಡ

ಅಹ್ಮದಾಬಾದ್, ಶುಕ್ರವಾರ, 11 ಅಕ್ಟೋಬರ್ 2019 (16:37 IST)

– ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ಹಳೇ ಗಾದೆ. ಈಗೀಗ ಕೆಲವು ದಂಪತಿಯ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿ, ಆಸ್ಪತ್ರೆ ಮಂಚಕ್ಕೆ ಒಯ್ದು ಮಲಗಿಸುತ್ತಿವೆ.


ಆಕೆ ಈಗಾಗಲೇ ಎರಡು ಮದುವೆಯಾಗಿದ್ದಳು. ಆತ ಒಂದು ಮದುವೆಯಾಗಿದ್ದನು. ಅದು ಹೇಗೋ ಪ್ರೀತಿ ಚಿಗುರಿ ಇಬ್ಬರೂ ಮದುವೆಯಾಗಿದ್ದಾರೆ.

ಆದರೆ ಮದುವೆ ಆದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ನಂತರದ ದಿನಗಳಲ್ಲಿ ಇಬ್ಬರಲ್ಲೂ ಜಗಳ ಶುರುವಾಗಿದೆ. ಸಣ್ಣ ವಿಷಯಕ್ಕೂ ಗಂಡ ದೊಡ್ಡದಾಗಿ ಜಗಳ ಮಾಡೋಕೆ ಪತ್ನಿಯೊಂದಿಗೆ ಮುಂದಾಗಿದ್ದಾನೆ.

ಜಗಳ ವಿಪರೀತವಾದ ಬಳಿಕ ಗಂಡ ಗರಂ ಆಗಿದ್ದಾನೆ. ಆಗಲೇ ಹೆಂಡತಿಯನ್ನು ತಬ್ಬಿಕೊಂಡಿದ್ದಾನೆ. ಕಿಸ್ ಮಾಡಬೇಕು ಅಂತ ಮುಂದಾಗಿದ್ದಾನೆ.  ಗಂಡ ಜಗಳ ಮರೆತಿರಬಹುದು ಅಂತ ತಿಳಿದ ಹೆಂಡತಿ ಕಿಸ್ ಮಾಡೋಕೆ ಮುಂದಾದಾಗ ಅವಳ ನಾಲಿಗೆ ಕಟ್ ಮಾಡಿ ಪರಾರಿಯಾಗಿದ್ದಾನೆ.

ಆರೋಪಿ ಗಂಡ ಅಯೂಬ್ ಪರಾರಿಯಾಗಿದ್ದು, ಆತನ ಪತ್ನಿ ತಸ್ಲಿಮಾ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಅಂದ್ಹಾಗೆ ಈ ಘಟನೆ ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈ ಬೀಜಕ್ಕಾಗಿ ಕುಟುಂಬದೊಂದಿಗೆ ಠಿಕಾಣಿ ಹೂಡಿರೋ ರೈತರು

ಕುಟುಂಬ ಸಹಿತವಾಗಿ ರೈತರು ಠಿಕಾಣಿ ಹೂಡಿರೋ ಘಟನೆ ನಡೆದಿದೆ.

news

ಹುಚ್ಚ ವೆಂಕಟ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಬಿಗ್ ಬಾಸ್ ಹೊಸ ಸರಣಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ವೇಳೆ ಹಳೇ ಸ್ಪರ್ಧಿ ಹುಚ್ಚ ವೆಂಕಟ್ ಬಗ್ಗೆ ...

news

ಶಾಕ್ ಮೇಲೆ ಶಾಕ್ ಕೊಡ್ತಿರೋ ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹಾಗೂ ರೈತರಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ.

news

ನಂಬರ್ ಪ್ಲೇಟ್ ತೆಗೆದ ವಾಹನದಲ್ಲಿ ನಡೆಯುತ್ತಿತ್ತು ದಂಧೆ

ವಾಹನದ ನಂಬರ್ ಪ್ಲೇಟ್ ತೆಗೆದು ಅದರ ಮೂಲಕ ಅಕ್ರಮ ದಂಧೆ ನಡೆಸಲಾಗುತ್ತಿತ್ತು.