ಗುಟ್ಕಾ ಪ್ರಿಯರು ಗಮನವಿಟ್ಟು ಈ ಸುದ್ದಿ ಓದಲೇಬೇಕು. ಗುಟ್ಕಾ ಜಗಿಯುತ್ತಾ ಇನ್ಮುಂದೆ ಎಲ್ಲೆಂದರಲ್ಲಿ ಉಗುಳುವಂತಿಲ್ಲ. ಹಾವೇರಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸುವುದನ್ನು ಹಾಗೂ ಉಗುಳುವುದನ್ನು ನಿಷೇಧಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಆದೇಶ ಹೊರಡಿಸಿದ್ದಾರೆ.ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು, ಪಾನ್ ಮಸಾಲಾ, ಜರ್ದಾ, ಖೈನಿ, ಎಲೆ ಅಡಿಕೆ ಇತ್ಯಾದಿಗಳ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ,