ರಾಜ್ಯದ ಈ ಜಿಲ್ಲೆಯಲ್ಲಿ ಇನ್ನೂ ಮೂರುದಿನಗಳ ಕಾಲ ನಿರಂತರವಾಗಿ ಮಳೆ ಸುರಿಯಲಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು . ಇನ್ನು 3 ದಿನಗಳು ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣವಿದ್ದು ನಿರಂತರ ಮಳೆಯಾಗಲಿದೆ.ಕಡೂರು ತಾಲ್ಲೂಕಿನಲ್ಲಿ ತುಂತುರು ಮಳೆಯಾಗಲಿದೆ ಎಂದು ಮೂಡಿಗೆರೆ ಹವಾಮಾನ ಇಲಾಖೆಯ ತಜ್ಞ ಪ್ರವೀಣ್ ಮಾಹಿತಿ ನೀಡಿದ್ದಾರೆ.ಈ ನಡುವೆ ಕೊಪ್ಪ - ಶೃಂಗೇರಿ ಭಾಗದಲ್ಲಿ ಹಲವು ಮರಗಳು ರಸ್ತೆಗೆ ಉರುಳಿದ್ದು, ಸಂಚಾರದ ಸಮಸ್ಯೆಯಾಗಿದೆ.