ಬೆಂಗಳೂರು-ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ.ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿದೆ.ಡಿಕೆ ಸುರೇಶ ದೇಶ ವಿಭಜನೆ ಹೇಳಿಕೆ, ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ವಿಳಂಬ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡದೆ ಇರುವುದನ್ನು ಸೇರಿ ಹಲವು ವಿಚಾರ ಮುಂದಿಟ್ಟು ಬಿಜೆಪಿ ಪ್ರತಿಭಟನೆ ನಡೆಸಿ ವ್ಯಾಪಕ ಆಕ್ರೋಶ ಹೊರಹಾಕಿದೆ.ಇನ್ನೂ ಪ್ರತಿಭಟನೆಯಲ್ಲಿ ಆರ್ ಅಶೋಕ್, ವಿಜಯೇಂದ್ರ, ಮಾಜಿ ಸಚಿವ ಸುರೇಶ್ ಕುಮಾರ್, ಸೇರಿ ಶಾಸಕರು, ಎಂಎಲ್ ಸಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.