ನನ್ನ ಕಣ ಕಣದಲ್ಲೂ ಕಾಂಗ್ರೆಸ್ ಇದೆ. ನಾನು ಅಪ್ಪಟ ಕಾಂಗ್ರೆಸ್ಸಿಗ. ಪಕ್ಷ ಬಿಡುವ ಪ್ರಶ್ನೆ ಇಲ್ಲ ಸಚಿವ ಹೇಳಿದ್ದಾರೆ.ಅಧಿಕಾರದ ದಾಹ ನನಗಿಲ್ಲ, ಕಾಂಗ್ರೆಸ್ ಬಿಡುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ಗೆ ಸಿದ್ಧಾಂತವಿದೆ, ಹೈಕಮಾಂಡ್ ಇದೆ. ಸಿದ್ದರಾಮಯ್ಯ ಇದ್ದಾರೆ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.ಬಿಜೆಪಿಯವರು ಮೂವತ್ತು ಜನರು ರಾಜಿನಾಮೆ ನೀಡುತ್ತಾರೆಂದು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನ ಯಾವ ಎಂಎಲ್ ಎನೂ ಕೂಡ ರಾಜಿನಾಮೆ ನೀಡುವುದಿಲ್ಲ. ಚುನಾವಣಾ ಪೂರ್ವದಲ್ಲಿ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು.