Widgets Magazine

ನಾನು ಸಚಿವ ಸ್ಥಾನದ ಆಕಾಂಕ್ಷಿ - ಶಾಸಕ ದೊಡ್ಡನಗೌಡ ಪಾಟೀಲ್

ಬಾಗಲಕೋಟೆ| pavithra| Last Modified ಸೋಮವಾರ, 30 ಡಿಸೆಂಬರ್ 2019 (10:40 IST)
ಬಾಗಲಕೋಟೆ : ನಾನು ಸಚಿವ ಸ್ಥಾನದ ಆಕಾಂಕ್ಷಿ. ಈ ಬಗ್ಗೆ ಸಿಎಂ ಬಿಎಸ್ ವೈ ಬಳಿ ಮನವಿ ಮಾಡಿದ್ದೇನೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದ್ದಾರೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಬೇಕೆಂದು ರೆಡ್ಡಿ ಸಮುದಾಯದ ಬೇಡಿಕೆ. ನನಗೆ ಸಚಿವ ಸ್ಥಾನವನ್ನು ನೀಡಿದರೂ, ನೀಡದಿದ್ರೂ ಸಂತೋಷ, ಸಚಿವ ಸ್ಥಾನ ಬೇಕೆಂದು ನಾನು ಪಟ್ಟು ಹಿಡಿದು ಕೂರುವುದಿಲ್ಲ. ನನಗೆ ಸಚಿವ ಸ್ಥಾನ ನೀಡದಿದ್ರೆ ಹುನಗುಂದ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಿ ಎಂದು ಹೇಳಿದ್ದಾರೆ.


ವಲಸೆ ಬಂದವರಿಗೂ ಸಚಿವ ಸ್ಥಾನವನ್ನು ನೀಡುವುದು ಮುಖ್ಯ. ಹೀಗಾಗಿ ಸಿಎಂ ಬಿಎಸ್ ವೈ ಮೊದಲು ಅವರಿಗೆ ಆದ್ಯತೆ ನೀಡಲಿ ಎಂದು ಅವರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :