ವಿಜಯನಗರ : ನಾನು ಎಲ್ಲಾ ಜಾತಿಯವರ ಬಡವರ ಪರವಾಗಿದ್ದೇನೆ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಯಾತ್ರಿ ನಿವಾಸ ಉದ್ಘಾಟನೆ ನಂತರ ಮಾತನಾಡಿದ ಅವರು, ಮಠ ಮಾಡಿದ್ದು ಕೇವಲ ಕುರುಬರಿಗಲ್ಲ. ಎಲ್ಲಾ ಹಿಂದುಳಿತ, ಶೋಷಿತ ಸಮಾಜಗಳಿಗೂ ಮಠ ಮಾಡಿದೆವು.ಟಿಪ್ಪು ಜಯಂತಿ, ಕನಕ ಜಯಂತಿ, ಎಲ್ಲಾ ಜಯಂತಿ ಮಾಡಿದ್ದು ನಾವು. ಕೆಂಗಲ್ ಹನುಮಂತಯ್ಯ ಅಲ್ಲಾ, ದೇವೇಗೌಡ ಅಲ್ಲ, ಯಡಿಯೂರಪ್ಪ ಅಲ್ಲ, ಕುಮಾರಸ್ವಾಮಿಯಲ್ಲ.