ಕೆಐಎಡಿಬಿ ಅಧಿಕಾರಿ ಪ್ರಕಾಶ್ಗೆ ನಿಂದಿಸಿಲ್ಲ. ಅವರು ಐಎಸ್ಪಿಆರ್ಎಲ್ ಕಂಪೆನಿ ಪರ ನಿಂತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಮೊಯ್ದಿನ್ ಬಾವಾ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಐಎಡಿಬಿ ರಸ್ತೆ ಅಭಿವೃದ್ಧಿಗಾಗಿ ಜನರು ಅಧಿಕಾರಿ ಬಳಿ ಹೋಗಿದ್ದರು. ಈ ವೇಳೆ ಅಧಿಕಾರಿ ಪ್ರಕಾಶ್ ಜನರನ್ನು ಗೆಟೌಟ್ ಎಂದು ಹೊರ ಕಳುಹಿಸಿದ್ದಾರೆ. ಹೀಗಾಗಿ ನಾನೇ ಕಚೇರಿಗೆ ಹೋಗಿ ಅಧಿಕಾರಿ ಜೊತೆ ಮಾತುಕತೆ ನಡೆಸಿದ್ದೇನೆ. ಅಧಿಕಾರಿಯನ್ನು ನಾನು ನಿಂದಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.