ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪರನ್ನ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದು ನಾನೇ.ಮುನಿಯಪ್ಪರ ಸೋಲಿಗೆ ಕಾರಣ ನಾನೇ ಆಗಿದ್ದೇನೆ. ಹೀಗಂತ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿಕೊಂಡಿದ್ದಾರೆ.ಸಿದ್ದರಾಮಯ್ಯ ಮಾಡಿರೋ ಆರೋಪಕ್ಕೆ ಪ್ರತಿಕ್ರಿಯಿಸಿರೋ ಶ್ರೀನಿವಾಸಗೌಡ ನನ್ನ ಸೋಲಿಗೆ ಈ ಹಿಂದೆ ಕಾರಣರಾಗಿದ್ದ ಮುನಿಯಪ್ಪರಿಗೆ ಸೋಲಿನ ರುಚಿ ತೋರಿಸಿದ್ರಲ್ಲಿ ತಪ್ಪೇನಿಲ್ಲ ಅಂತಂದ್ರು.ಹಳ್ಳಿ ಹಳ್ಳಿಗಳಿಗೆ ತೆರಳಿ ಮುನಿಯಪ್ಪ ವಿರುದ್ಧ ಪ್ರಚಾರ ಮಾಡಿದ್ದೇನೆ. ಹೀಗಂತ ಶ್ರೀನಿವಾಸಗೌಡ ಹೇಳಿಕೆ ನೀಡಿರೋದು ಇದು ಜೆಡಿಎಸ್ ಗೆ ತಲೆ ನೋವಿಗೆ ಕಾರಣವಾಗುವ ಸಾಧ್ಯತೆಯಿದೆ.