ಮಂಡ್ಯ : ನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ. ನಾನು ಪೂರ್ಣ ಪ್ರಮಾಣದಲ್ಲಿ ಇಲ್ಲೇ ಇರಲು ಬರಲಿಲ್ಲ. ಚುನಾವಣೆಗೆ ನಿಲ್ಲುವ ಬಗೆಗೆ ಆಗಲಿ, ರಾಜಕೀಯ ಪಕ್ಷ ಸೇರುವ ಬಗೆಗೆ ಆಗಲಿ ಅಥವಾ ಸ್ವತಂತ್ರವಾಗಿ ಉಳಿಯುವ ಬಗೆಗೆ ಆಗಲಿ ಇನ್ನೂ ನಿರ್ಧಾರವಾಗಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.ರಾಜ್ಯ ರಾಜಕಾರಣಕ್ಕೆ ಸಂಸದೆ ಸುಮಲತಾ ಅಂಬರೀಶ್ ಬರಬೇಕು ಎಂಬ ಬೆಂಬಲಿಗರ ನಿರ್ಧಾರ ವಿಚಾರವಾಗಿ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ನಿಲ್ಲಬೇಕು ಎಂಬುದು