ಕಳೆದ ವಾರ ಹಿಂದೆಯೇ ಗೃಹ ಖಾತೆ ನಿಭಾಯಿಸುವಂತೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅವರ ಆಶಯದಂತೆ ಗೃಹಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನೂತನ ಗೃಹಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ ಈಗಾಗಲೇ ನಾಲ್ಕು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಅದರಂತೆ, ಗೃಹಖಾತೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ. ಯಾವುದೇ ರೀತಿ ಭಂಗ ತರುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಗೃಹಖಾತೆಗಾಗಿ ರಮಾನಾಥ್ ರೈ ಮತ್ತು ನನ್ನ ಮಧ್ಯೆ ಪೈಪೋಟಿಯಿರಲಿಲ್ಲ. ಸಿಎಂ