ಪುಟ್ಟ ನಾಯಿ ಮರಿಗಳು ಆಟವಾಡುವುದನ್ನು ನೋಡುವುದೇ ಒಂದು ರೀತಿಯ ಸಂತೋಷ. ನಾಯಿ ಮರಿಗಳ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ. ಅದರಲ್ಲಿ ಒಂದು ಮರಿ ಅದೇಕೋ ಗೊತ್ತಿಲ್ಲ ಮತ್ತೊಂದು ಮರಿಯೊಂದಿಗೆ ಮುನಿಸಿಕೊಂಡಿದೆ. ಮುನಿಸಿಕೊಂಡ ನಾಯಿ ಮರಿ ಒಂದೆಡೆ ಮಲಗಿಕೊಂಡಿದೆ. ಮತ್ತೊಂದು ಪುಟ್ಟ ನಾಯಿ ಮರಿ ಬಂದು ಅದರೊಂದಿಗೆ ಮಲಗುತ್ತದೆ. ಆದರೆ ಇದ್ಕಕ್ಕೆ ಮುನಿಸಿಕೊಂಡ ನಾಯಿ ಮರಿ ಬೇರೆಡೆಗೆ ಹೋಗಿ ಮಲಗುತ್ತದೆ. ಆದರೆ ಈ ಪುಟ್ಟ ಮರಿಗೆ ತನ್ನ ಗೆಳೆಯನೊಂದಿಗೆ ಇರುವ ಹಂಬಲ.