ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವ ಸಾಕ್ಷ್ಯಚಿತ್ರಕ್ಕೆ ಕೋಟಿ ರೂ. ಖರ್ಚು ಮಾಡುವ ಅಗತ್ಯವೇನಿತ್ತು ಎಂದು ಟೀಕೆಗಳು ಬಂದ ಹಿನ್ನೆಲೆಯಲ್ಲಿ ಈ ಪ್ರಾಜೆಕ್ಟ್ನಿಂದ ಹೊರಬರಲು ಟಿ.ಎನ್.ಸೀತಾರಾಂ ನಿರ್ಧರಿಸಿದ್ದಾರಂತೆ. ಹೀಗಂತ ಅವರೇ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. `ಶಾಸನ ಸಭೆ ನಡೆದು ಬಂದ ದಾರಿ - 7 ಚಿತ್ರದ ಪೈಕಿ ಎರಡನ್ನು ಮುಗಿಸಿದ್ದೇನೆ. ಅವರಿಗೆ ಕೊಟ್ಟು ಕೈ ಮುಗಿದು ಬರುತ್ತೇನೆ. ಮಿಕ್ಕ 5 ಮಾಡಲಾರೆ. ಅವರು ಹಿಂದೆ ಹೇಳಿದಂತೆ ಪೂರ್ತಿ ಹಣ ಕೊಡುತ್ತೇನೆಂದರೂ ನನಗೆ ಬೇಡ.