ಇತ್ತೀಚೆಗೆ ಹಿಂದೂ-ಮುಸ್ಲಿಂ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಕೋಮು ಸಾಮರಸ್ಯವನ್ನು ಕದಡುತ್ತಿದೆ. ಹಿಜಾಬ್, ಹಲಾಲ್, ಮಸೀದಿ, ಧ್ವನಿವರ್ಧಕ ಹೀಗೆ ನಾನಾ ವಿಚಾರಗಳು ಎರಡು ಕೋಮುಗಳ ನಡುವಿನ ಜನರ ಸಂಬಂಧ ಕೆಡಿಸುತ್ತಿವೆ. ಸಾಲದೆಂಬಂತೆ ಈ ವಿಚಾರಗಳ ಬಗ್ಗೆ ರಾಜಕೀಯ ಗಣ್ಯರು ನೀಡುತ್ತಿರುವ ಹೇಳಿಕೆ ಎರಡೂ ಧರ್ಮದ ನಡುವಿನ ಜನರನ್ನು ಮತ್ತಷ್ಟು ದೂರ ಮಾಡುತ್ತಿವೆ. ಸದ್ಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಕೂಡಾ ಹಿಂದೂ, ಮುಸ್ಲಿಂ ಜನರ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದು,