ಸೋಲಿನ ಭಯ ನನಗಿಲ್ಲ. ನಾನು ಈ ಹಿಂದೆ ಅನೇಕ ಪಕ್ಷಗಳಿಂದ ಚುನಾಯಿತನಾಗಿ ಬಂದಿದ್ದೇನೆ. ನನ್ನನ್ನು ಚುನಾಯಿತಗೊಳಿಸಿದವರು ಶಿಕ್ಷಕರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವಿರೋಧ ಪಕ್ಷದವರು ನಮಗೇ ಮತ ಹಾಕಿ ಎಂದು ಹೇಳುವುದಿಲ್ಲ. ಏನಾದರೂ ಮಾತನಾಡಬೇಕು ಎಂಬ ಉದ್ದೇಶದಿಂದ ಸೋಲಿನ ಭಯದಿಂದ ಹೊರಟ್ಟಿ ಬಿಜೆಪಿಗೆ ಹೋಗಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇವರ ಹೇಳಿಕೆಗೆ ಜೂ.15ನೇ ತಾರೀಖಿಗೆ ಉತ್ತರ ಸಿಗುತ್ತದೆ ಎಂದರು.