ಮೇಕೆದಾಟು ಯೋಜನೆ ಮಾಡಿಯೇ ಸಿದ್ಧ. ಅಣ್ಣಾಮಲೈ ಪ್ರತಿಭಟನೆಗೆ ಡೋಂಟ್ ಕೇರ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಆಗಿ ಉತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವನನ್ನ ದೊಡ್ಡ ಮನುಷ್ಯನನ್ನಾಗಿ ಮಾಡಬೇಡಿ. ಎರಡು ರಾಜ್ಯಗಳ ಸಂಬಂಧದ ವಿಚಾರವಿದು. ಹೆಚ್ಚುವರಿ ನೀರು ತಡೆದು, ನೀರು ಕೊಡುವ ಯೋಜನೆ ಇದಾಗಿದೆ. ಅದಕ್ಕೇ ನಾವು ಈ ಯೋಜನೆ ತರ್ತಿದ್ದೇವೆ ಎಂದರು. ಮೇಕೆದಾಟು ಯೋಜನೆ ವಿರುದ್ಧ ಯಾವ ಪ್ರತಿಭಟನೆಗೂ ಐ ಡೋಂಟ್ ಕೇರ್.