ನನಗೆ ಮುಸ್ಲಿಮರ ಓಟು ಬೇಡ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ಸಾರ್ವಜನಿಕ ಸಮಾರಂಭದಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಬೆಳ್ತಂಗಡಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ನನಗೆ ಮುಸ್ಲಿಮರ ಓಟು ಬೇಡ. ಹಿಂದುಗಳ ಓಟು ಬೇಕು ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ನನಗೆ ಬ್ಯಾರಿಗಳ ಓಟು ಬೇಡ. ನಾನು ಅವರ ಓಟಿನಲ್ಲಿ ಗೆಲ್ಲಬೇಕಾಗಿಲ್ಲ. ಹಿಂದುಗಳ ಓಟು ಸಿಕ್ಕರೆ ಸಾಕು ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಗೆ ಸ್ಪರ್ಧಿಸಲು