ನನಗೆ ಕಾನೂನಿನ ಮೇಲೆ ನಂಬಿಕೆ ಇದೆ- ಡಿಕೆ ಶಿವಕುಮಾರ್

ನವದೆಹಲಿ| pavithra| Last Modified ಶನಿವಾರ, 31 ಆಗಸ್ಟ್ 2019 (12:52 IST)
ನವದೆಹಲಿ : ನಾನು ಏನೂ ತಪ್ಪು ಮಾಡಿಲ್ಲ. ಹೀಗಾಗಿ ನಾನು ಹೆದರಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಎರಡನೇಯ ದಿನವಾದ ಇಂದು ವಿಚಾರಣೆಗೆಂದು ಇಡಿ ಕಚೇರಿಗೆ ತೆರಳುತ್ತಿರುವ ಡಿಕೆ ಶಿವಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಏನೂ ತಪ್ಪು ಮಾಡಿಲ್ಲ. ಹೀಗಾಗಿ ನಾನು ಹೆದರಲ್ಲ. ನಾನು ಇದರ ಬಗ್ಗೆ ಜಾಸ್ತಿ ಯೋಚನೆ ಮಾಡುದಿಲ್ಲ ಎಂದು ಹೇಳಿದ್ದಾರೆ.


‘ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಅಧಿಕಾರಿಗಳಿಗೆ ಕೂಡ ನಾನು ಸಹಕರಿಸುತ್ತಿದ್ದೇನೆ. ತನಿಖೆಗೆ ಅವರು ಒಂದು ತಿಂಗಳು ಬನ್ನಿ ಎಂದರೂ ನಾನು ಬರುತ್ತೇನೆ. ನನಗೆ ಯಾವ ಭಯವೂ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :