ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಗೂ ನನಗೂ ಯಾವುದೇ ಸಂಬಂಧವಿಲ್ಲ. ಅದು ರಾಜಕಿಯೇತರ ಸಂಘಟನೆ. ಬ್ರಿಗೇಡ್ ಆಯೋಜಕರು ಬೇಕಿದ್ದರೆ ಕಾಂಗ್ರೆಸ್ ನಾಯಕರನ್ನೂ ಸಹ ಕರೆಯಬಹುದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದೇನೆ. ಇನ್ನೂ ಮುಂದೆ ಬ್ರಿಗೇಡ್ ವಿಷಯಕ್ಕೆ ತಲೆಹಾಕುವುದಿಲ್ಲ. ಬ್ರಿಗೇಡ್ ಪದಾಧಿಕಾರಿಗಳ ಸಭೆಗೆ ಆಮಂತ್ರಣ ನೀಡಿದರೇ ಮಾತ್ರ ಹೋಗುತ್ತೇನೆ ಎಂದು ತಿಳಿಸಿದರು.