ಮೈಸೂರಿನಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಹೋಟೆಲ್ ನಲ್ಲಿ ಸಿಬ್ಬಂದಿಗೆ ಹಲ್ಲೆ ಮಾಡಿರುವುದನ್ನು ಸಾಬೀತುಪಡಿಸಿ ಎಂದು ನಟ ದರ್ಶನ್ ಸವಾಲು ಹಾಕಿದ ಬೆನ್ನಲ್ಲೇ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ಬಳಿ ಸಾಕ್ಷ್ಯಾಧಾರಗಳಿವೆ. ದರ್ಶನ್ ಕೇವಲ ಒಂದು ಬಾರಿ ಅಲ್ಲ ಹಲವಾರು ಬಾರಿ ಹಲ್ಲೆ ಮಾಡಿರುವ ಉದಾಹರಣೆಗಳು ನಮ್ಮ ಬಳಿ ಇವೆ ಎಂದರು. ಸಂದೇಶ್ ನಾಗರಾಜ್ ಮೊದಲು ಗಲಾಟೆ ಆಗಿಲ್ಲ ಅಂದರು. ಆಮೇಲೆ ಆಗಿದೆ. ಆದರೆ ಹಲ್ಲೆ ಆಗಿಲ್ಲ, ಬೈದಿದ್ದು