ರಾಷ್ಟ್ರದ ಎಲ್ಲಾ ಶಾಸಕರು ಸಂಸದರಿಗೆ ಪತ್ರ ಬರೆದಿದ್ದೆನೆ. ನನಗೆ ಸಂಖ್ಯಾಬಲ ಇದೆಯೋ ಇಲ್ಲವೋ ಗೊತ್ತಿಲ್ಲ. ಸಂಖ್ಯಾಬಲ ಮೊದಲೇ ನಿರ್ಧಾರವಾಗುವುದಾದರೆ ಚುನಾವಣೆ ನಡೆಸುವದು ಯಾಕೆ ಎಂದು ಯುಪಿಎ ಮೈತ್ರಿಕೂಟ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ಪ್ರಶ್ನಿಸಿದ್ದಾರೆ ಕೆಲವರು ಇದು ದಲಿತರ ಚುನಾವಣೆ ಎನ್ನುತ್ತಾರೆ. ಇದು ಇಬ್ಬರು ದಲಿತರಾಗಿರುವುದರಿಂದ ದಲಿತರ ಫೈಟ್ ಎಂದು ಬಿಂಬಿಸಲಾಗುತ್ತಿದೆ. ಹಾಗೇ ಯೋಚಿಸುವವರು ತಮ್ಮ ಯೋಚನೆಯನ್ನು ಬದಲಿಸಬೇಕು. ನನ್ನ ಮತ್ತು ಕೋವಿಂದ್ ಸ್ಪರ್ಧೆಗೆ ಜಾತಿ ಬಣ್ಣ ಹಚ್ಚಿರುವುದು ದುರದೃಷ್ಟಕರ