ನಿನ್ನೆಯಷ್ಟೇ ರಾಧಿಕಾ ಪಂಡಿತ್ ಇನ್ಸ್ ಟಾಗ್ರಾಮ್ ಪೇಜ್ನಲ್ಲಿ ಹೊಸ ಫೋಟೋವೊಂದನ್ನು ಹಾಕಿ ‘ನಾನೂ ನಾಚುತ್ತೇನೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಹೃದಯ ಎಮೋಜಿಗಳನ್ನು ನೆಚ್ಚಿನ ನಟಿಗೆ ಕಳುಹಿಸಿದ್ದಾರೆ. ತೆರೆಯ ಮೇಲೆ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದೂ ಅಭಿಮಾನಿಗಳು ಬರೆದಿದ್ದಾರೆ. ಕೆಲ ತಿಂಗಳಿಂದ ರಾಧಿಕಾ ಮತ್ತೆ ಸಿನಿಮಾ ರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಮೂರ್ನಾಲ್ಕು ವರ್ಷಗಳಿಂದ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಅವರು,ಈಗಲಾದರೂ ತೆರೆ