ಹುಬ್ಬಳ್ಳಿ : ಯಡಿಯೂರಪ್ಪ ನನ್ನ ಟಿಕೆಟ್ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಅಸಹಾಯಕರಾದರು. ಈಗ ನನ್ನ ಮೇಲೆ ಯಡಿಯೂರಪ್ಪ ಮಾಡಿರುವ ಟೀಕೆಗಳನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ಯಡಿಯೂರಪ್ಪ ಎಂಬ ಹಿರಿಯ ಮತ್ತು ಲಿಂಗಾಯತ ನಾಯಕರಿಂದ ನನ್ನ ಬೈಯಿಸಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಲಾಗುತ್ತಿದೆ. ಇದೇ ಯಡಿಯೂರಪ್ಪನವರು ಕೆಜೆಪಿ ಕಟ್ಟಿದಾಗ