ನಾನೂ ಕೂಡಾ ಸಚಿವ ಸ್ಥಾನದ ಆಕಾಂಕ್ಷಿ: ಯಡ್ಡಿಗೆ ಡಿವಿಎಸ್ ಟಾಂಗ್

ಬೆಂಗಳೂರು| Rajesh patil| Last Modified ಶನಿವಾರ, 17 ಮೇ 2014 (16:50 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ನಾನೂ ಕೂಡಾ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಂಸದ ಹೇಳಿದ್ದಾರೆ.
ಆದರೆ, ಸಚಿವ ಸ್ಥಾನ ಪಡೆಯಲು ಯಾವುದೇ ರೀತಿಯ ಲಾಬಿಗೆ ಶರಣಾಗುವುದಿಲ್ಲ. ಹಲವು ದಶಕಗಳ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಸಚಿವ ಸ್ತಾನ ನೀಡಲಿ ಎನ್ನುವುದೇ ನನ್ನ ಬಯಕೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವೆ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರಿಂದ, ಸಚಿವರಾಗುವವರ ಸಾಲಿನ ಪಟ್ಟಿ ಕೂಡಾ ಉದ್ದವಾಗಿದೆ.


ಸಚಿವ ಸ್ಥಾನಕ್ಕಾಗಿ ಡಿ.ವಿ.ಸದಾನಂದಗೌಡ ಮತ್ತು ಬಳಗದ ಮಧ್ಯೆ ಹಣಾಹಣಿ ನಡೆಯುವ ಸಾಧ್ಯತೆಗಳು ಕಂಡು ಬರುತ್ತಿವೆ. ನಾನೊಬ್ಬ ಪ್ರಾಮಾಣಿಕ ವ್ಯಕ್ತಿ ಶುದ್ದಹಸ್ತ, ಯಾವುದೇ ರೀತಿಯ ಭ್ರಷ್ಟಾಚಾರದ ಆರೋಪಗಳು ನನ್ನ ಮೇಲಿಲ್ಲ ಎಂದು ಆಗಾಗ ಯಡ್ಡಿಗೆ ಟಾಂಗ್ ಕೊಡುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :