ಹೊಸಪೇಟೆ (ಆ.12): ರಾಜಕಾರಣದಲ್ಲಿ ನನ್ನನ್ನು ರಕ್ಷಣೆ ಮಾಡುವವರು ಬಹಳಷ್ಟು ಮಂದಿ ಇದ್ದಾರೆ, ಬಹಳ ದೊಡ್ಡ ಪ್ರಭಾವಿಗಳು ಇದ್ದಾರೆ ಎಂಬ ಆತ್ಮವಿಶ್ವಾಸದಲ್ಲಿದ್ದೆ. ಅದೆಲ್ಲ ಭ್ರಮೆ ಎನ್ನುವುದು ಇದೀಗ ಗೊತ್ತಾಯ್ತು. ವೇಣುಗೋಪಾಲ ಸ್ವಾಮಿ ದೇಗುಲದಿಂದಲೇ ನನ್ನ ರಾಜಕೀಯ ಆರಂಭವಾಗಿದೆ. ಈ ದೇಗುಲದಿಂದಲೇ ಅಂತ್ಯವೂ ಆಗಬಹುದು, ಇಲ್ಲವೇ ಮರು ಆರಂಭವೂ ಆಗಬಹುದು ಎಂದು ಪರಿಸರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಖಾತೆ ವಿಚಾರವಾಗಿ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ನಗರದ ಪಟೇಲ್ನಗರದಲ್ಲಿರುವ ವೇಣುಗೋಪಾಲಸ್ವಾಮಿ