Widgets Magazine

ನಾನು ಕೊಲಂಬೋಗೆ ಹೋಗಿದ್ದು ನಿಜ-ಕೊನೆಗೂ ಒಪ್ಪಿಕೊಂಡ ಶಾಸಕ ಜಮೀರ್

ಬೆಂಗಳೂರು| pavithra| Last Modified ಶನಿವಾರ, 12 ಸೆಪ್ಟಂಬರ್ 2020 (13:45 IST)
ಬೆಂಗಳೂರು : ನಾನು ಕೊಲಂಬೋಗೆ ಹೋಗಿದ್ದು ನಿಜ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕೊನೆಗೂ ಒಪ್ಪಿಕೊಂಡಿದ್ದಾರೆ.

ಕೊಲಂಬೋ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಶಾಸಕ ಜಮೀರ್, ಕುಮಾರಸ್ವಾಮಿ ಜತೆಗೆ ಕೊಲಂಬೋಗೆ ಹೋಗಿದ್ದೆ. ಒಂದೂವರೆ ವರ್ಷಕ್ಕೊಮ್ಮೆ ಹೋಗ್ತಾ ಇರ್ತಿನಿ. ಕುಮಾರಸ್ವಾಮಿಯೂ ಕೊಲಂಬೊಗೆ ಹೋಗಿದ್ರು, ಜೆಡಿಎಸ್ ನ 28ಶಾಸಕರು ಕ್ಯಾಸಿನೋಗೆ ಹೋಗಿದ್ರು. ಡ್ರಗ್ಸ್ ಆರೋಪಿ ಸಾಬೀತಾದರೆ ನನ್ನನ್ನು ಗಲ್ಲಿಗೆ ಹಾಕಲಿ. ಸಂಬರಗಿ ಡ್ರಗ್ಸ್ ಆರೋಪ ಸಾಬೀತುಮಾಡಿದರೆ ನನ್ನ ಆಸ್ತಿ ಬರೆದುಕೊಡ್ತಿನಿ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :