ನಮ್ಮ ಆಸೆ ಈಡೇರಿದರೆ ಬರುವ ಕೆಲವೇ ದಿನಗಳಲ್ಲಿ ನಾನು ಮುಖ್ಯಮಂತ್ರಿ ಆಗಬಹುದು. ಜೀವಂತ ಇದ್ದರೇ ಇದೇ ಅವಧಿ, ಸತ್ತ ರೇ ಮುಂದಿನ ಅವಧಿಯಲ್ಲಿ ಎಂದು ಸಚಿವ ಉಮೇಶ್ ಕತ್ತಿ ಮುಖ್ಯಮಂತ್ರಿ ಆಗುವ ಆಸೆ ಬಿಚ್ಚಿಟ್ಟಿದ್ದಾರೆ. ಬಾಗಲಕೋಟೆಯಲ್ಲಿ ಭಾನುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಆದರೆ ಇದೇ ಅವಧಿಯಲ್ಲಿ ಸಿಎಂ ಆಗ್ತೀನಿ. ಹೋದರೆ (ಸತ್ತರೆ) ನನ್ನ ಕಡೆಯಿಂದ ಏನು ಮಾಡೋಕೆ ಆಗೋಲ್ಲ. ಮತ್ತೇ ಏನು ಹೇಳಬೇಕು ನಿಮಗೆ ಎಂದು ಚಟಾಕಿ ಹಾರಿಸಿದರು.