ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ ಯಾರೇ ಹೇಳಿದರೂ ನಾನು ಹಸಿರು ಶಾಲು ತೆಗೆಯುವುದಿಲ್ಲ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಇನ್ನೂ ರೈತ ಸಂಘದ ಅಧ್ಯಕ್ಷ ನಾಗಿದ್ದೇನೆ. ಯಾವುದೇ ತಪ್ಪು ಮಾಡದೇ ಹಸಿರು ಶಾಲು ಹಾಕಬೇಡಿ ಅಂದರೆ ಹೇಗಾಗುತ್ತೆ ಎಂದು ಪ್ರಶ್ನಿಸಿದರು. ನಿನ್ನೆ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಅವರು ಒಬ್ಬ ರಾಷ್ಟೀಯ ನಾಯಕರು ಅವರಿಗೆ