ಹಾವೇರಿ : ನಾನು ಚುನಾವಣೆಗೆ ನಿಲ್ಲುತ್ತೇನೆ, ಗೆಲ್ಲುತ್ತೇನೆ. ಶಿಕ್ಷಕರು ನನ್ನನ್ನು ಎಂದಿಗೂ ಕೈಬಿಟ್ಟಿಲ್ಲ, ಬಿಡುವುದಿಲ್ಲ.24 ಗಂಟೆ ಕೆಲಸ ಮಾಡುವವನನ್ನು ಬಿಟ್ಟು ಬೇರೆಯವರಿಗೆ ಯಾಕೆ ವೋಟು ಹಾಕುತ್ತಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದರು.ಸಭಾಪತಿ ಇದ್ದವನು ಪಕ್ಷಾಂತರ ಮಾಡಿ ಹೋಗಬೇಕಾ? ಹಾಗಿದ್ದರೆ ರಾಜೀನಾಮೆ ಕೊಟ್ಟು ಹೋಗುವೆ. ಬರುವ ಚುನಾವಣೆಯಲ್ಲಿ ಬಿಜೆಪಿಗೆ ಹೋಗುವ ಬಗ್ಗೆ ವಿಚಾರ ಮಾಡುತ್ತಿದ್ದೇನೆ.ಅನೇಕ ಸ್ನೇಹಿತರು ಕರೆಯುತ್ತಿದ್ದಾರೆ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಸಂವಿಧಾನಬದ್ಧ ಹುದ್ದೆಯಲ್ಲಿದ್ದು