ನಾನು ಹುಲಿಯೂ ಅಲ್ಲ, ಇಲಿಯೂ ಅಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ. ವಿಧಾನಪರಿಷತ್ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಮಧ್ಯೆ ಸ್ವಾರಸ್ಯಕರ ಚರ್ಚೆ ನಡೆದು ಕೆಲ ಕಾಲ ನಗುವಿನ ವಾತಾವರಣ ನಿರ್ಮಿಸಿತು. ಬಿಜೆಪಿ ಶಾಸಕರೊಬ್ಬರು ಜಾರ್ಜ್ ಪ್ರಭಾವಿ ಸಚಿವ ಎಂದು ಹೇಳಿದಾಗ ಮಧ್ಯಪ್ರವೇಶಿಸಿದ ಸಿಎಂ ನೀವು ಪ್ರಭಾವಿಯಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿ ಶಾಸಕನ ನೆರವಿಗೆ ಬಂದ ಈಶ್ವರಪ್ಪ ಪಾಪ ಇಲಿಯ ಮೇಲೆ ಮುಗಿಬೀಳುತ್ತಿದ್ದೀರಾ?ಎಂದು ಹೇಳಿದರು.