ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಲಿ(ಐಸಿಸಿ) ಮತ್ತು ಎಂಆರ್ಎಫ್ ಟೈರ್ಸ್ ಬುಧವಾರ ನಾಲ್ಕು ವರ್ಷಗಳ ಒಪ್ಪಂದವನ್ನು ಪ್ರಕಟಿಸಿದ್ದು, ಒಪ್ಪಂದದ ಪ್ರಕಾರ 2016ರಿಂದ ಐಸಿಸಿ ಈವೆಂಟ್ಗಳಿಗೆ ಎಂಆರ್ಎಫ್ನ ಜಾಗತಿಕ ಪಾಲುದಾರಿಕೆಯನ್ನು ದೃಢಪಡಿಸಿದೆ.ಎಂಆರ್ಎಫ್ ಟೈರ್ಸ್ ಮುಖ್ಯಕಚೇರಿಯಿರುವ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಕಟಣೆಯನ್ನು ನೀಡಲಾಗಿದ್ದು, ಐಸಿಸಿ ಮುಖ್ಯ ಎಕ್ಸಿಕ್ಯೂಟಿವ್ ಡೇವಿಡ್ ರಿಚರ್ಡ್ಸನ್ , ಎಂಆರ್ಎಫ್ ಟೈರ್ಸ್ ಅಧ್ಯಕ್ಷ ಕೆಎಂ ಮಾಮ್ಮೇನ್ ಮತ್ತು ಮಾಜಿ ಕ್ರಿಕೆಟ್ ತಾರೆ ಎಂಆರ್ಎಫ್ ಬ್ರಾಂಡ್ ರಾಯಭಾರಿ ಸಚಿನ್ ತೆಂಡೂಲ್ಕರ್ ಮತ್ತಿತರ ಅಧಿಕಾರಿಗಳು