ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹಾಗೂ ರೈತರಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ.ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಐಸಿಐಸಿಐ ಬ್ಯಾಂಕ್ ಸಿಬ್ಬಂದಿ ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ. ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ರೈತನಿಗೆ ಸೇರಿದ ಟ್ರ್ಯಾಕ್ಟರ್ ವಶಕ್ಕೆ ತೆಗೆದುಕೊಂಡಿದ್ದಾರೆ.ಐದುಲಕ್ಷ ಸಾಲ ಕೊಟ್ಟಿತ್ತು ಐಸಿಐಸಿಐ ಬ್ಯಾಂಕ್. ಸ್ವರಾಜ್ ಕಂಪನಿಯ ಟ್ರ್ಯಾಕ್ಟರ್ ಗೆ ಸಾಲ ನೀಡಿತ್ತು ಬ್ಯಾಂಕ್.ಬರಗಾಲದಿಂದ ತತ್ತರಿಸಿರುವ ರೈತ ಕಂಗಾಲಾಗಿರುವಾಗಲೇ ಯಾವುದೇ ನೋಟಿಸ್ ಕೊಡದೇ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ ಬ್ಯಾಂಕ್