ಆರ್.ಟಿ.ನಗರದಲ್ಲಿ ಹಂಗಾಮಿ ಸಿಎಂರನ್ನ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಭೇಟಿ ಮಾಡಿದರು. ಭೇಟಿ ಬಳಿಕ ಮಾತನಾಡಿದ ಸಿ.ಟಿ.ರವಿ, ಚುನಾವಣೆ ಈ ರೀತಿ ಆಗೋಕೆ ಕಾರಣ ಏನು ಅನ್ನೋದರ ಚರ್ಚೆಯಾಗಿದೆ. ಫಲಿತಾಂಶದ ಬಗ್ಗೆ ಅವಲೋಕನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಸೈದ್ದಾಂತಿಕ ಹೋರಾಟ ಮುಂದುವರೆಸ್ತೇವೆ. ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಹಲಾಲ್, ಹಿಜಾಬ್, ದೇವಸ್ಥಾನಗಳಿಗೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು, ಗೋಹತ್ಯೆಗೆ, ಲವ್ ಜಿಹಾದ್ ಗೆ ಪ್ರಚೋದನೆ ಕೊಡುವಂತಹ ಮತಿಯವಾದಿ ಶಕ್ತಿಗಳು ಬಲವಾಗಿವೆ.