ವಿಜಯಪುರ : ಡಿಕೆ ಶಿವಕುಮಾರ್ ಉಪ್ಪು ತಿಂದಿದ್ದರೆ ನೀರು ಕುಡಿಯುತ್ತಾರೆ ಎಂದು ಸಚಿವ ಬಿ ಶ್ರೀರಾಮಲು ಟಾಂಗ್ ನೀಡಿದ್ದಾರೆ. ಡಿಕೆ ಶಿವಕುಮಾರಿಗೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ರಾಜಕಾರಣಿ ಹೊರತಾಗಿ ಒಬ್ಬ ಉದ್ಯಮಿ ಕೂಡ. ಅವರು ಐಟಿ ಅಧಿಕಾರಿಗಳ ದಾಳಿ ವೇಳೆ ಪೇಪರ್ ಹರಿದು ಹಾಕಿರುವ ಘಟನೆ ಎಲ್ಲರಿಗೂ ತಿಳಿದಿದೆ. ಅವರು ಎಲ್ಲೋ ಮಾಡಿದ ತಪ್ಪನ್ನು ರಾಜಕೀಯಕ್ಕೆ ಸಂಬಂಧ ಕಲ್ಪಿಸುತ್ತಿದ್ದಾರೆ.