ವಿಧಾನಸಭೆ ಚುನಾವಣೆ ಅವಧಿಗಿಂತ ಮುಂಚೆ ನಡೆದಲ್ಲಿ ಬಿಜೆಪಿ ಪಕ್ಷಕ್ಕೆ ಕೇವಲ 80 ಸೀಟುಗಳು ಮಾತ್ರ ಲಭಿಸಲಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗುಡುಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಡುವಿನ ವೈಮನಸ್ಸು ಪರಸ್ಪರ ಆರೋಪ ಪ್ರತ್ಯಾರೋಪಗಳು ಪಕ್ಷದ ಮೇಲೆ ನೇರ ಪರಿಣಾಮ ಬೀರಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಭಯ ನಾಯಕರು ಕೂಡಲೇ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ತೊರೆದು ಪಕ್ಷವನ್ನು ಬೇರು ಮಟ್ಟದಿಂದ, ಬೂತ್