ಬೆಂಗಳೂರು: ಲಿಂಗಾಯುತ ಪ್ರತ್ಯೇಕ ಧರ್ಮ ವಿಚಾರವಾಗಿ ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ನಾನು ತಿರುಚಿದ್ದರೆ, ಸುಳ್ಳು ಹೇಳಿದ್ದರೆ, ನನ್ನ ಕುಟುಂಬ ಸರ್ವನಾಶವಾಗಲಿ ಎಂದು ಸಚಿವ ಎಂಬಿ ಪಾಟೀಲ್ ಬಹಿರಂಗ ಸವಾಲು ಹಾಕಿದ್ದಾರೆ. ಸಿದ್ದಗಂಗಾ ಶ್ರೀಗಳಿಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಒಲವಿದೆ. ಆದರೆ ಬಿಜೆಪಿಯ ಯಡಿಯೂರಪ್ಪ, ಸೋಮಣ್ಣ ಮುಂತಾದವರು ಹಾದಿ ತಪ್ಪಿಸುತ್ತಿದ್ದಾರೆ ಎಂದಿದ್ದರು.ಇದನ್ನು ಬಿಜೆಪಿ ಆಕ್ಷೇಪಿಸಿತ್ತು. ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ಸಚಿವರು ತಿರುಚಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ