Widgets Magazine

5 ಲಕ್ಷ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದ್ದರೂ ರಾಜೀನಾಮೆ: ಸಚಿವ ಜಾರಕಿಹೋಳಿ

ಬೆಂಗಳೂರು| Vinod| Last Modified ಬುಧವಾರ, 25 ಜನವರಿ 2017 (15:24 IST)
ಐಟಿ ದಾಳಿ ವೇಳೆ ನನ್ನ ಮನೆಯಲ್ಲಿ 41 ಲಕ್ಷ ರೂಪಾಯಿ ಪತ್ತೆಯಾಗಿರುವ ಸಂಗತಿ ನಿಜವಾದರೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕನಿಷ್ಠ 5 ಲಕ್ಷ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದ್ದರೂ ಸಹ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಸವಾಲ್ ಎಸೆದಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಐಟಿ ದಾಳಿಯ ವೇಳೆ ಸಿಕ್ಕಿರುವುದು 41 ಸಾವಿರ ರೂಪಾಯಿ ಮಾತ್ರ. 41 ಲಕ್ಷ ಅಲ್ಲ.  ಒಂದು ವೇಳೆ 41 ಲಕ್ಷ ರೂಪಾಯಿ ಪತ್ತೆಯಾಗಿರುವ ಸಂಗತಿ ನಿಜವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು. 
 
ಏಕಾಕಾಲಕ್ಕೆ ಬೆಳಗಾವಿಯ 16 ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ಇಲಾಖೆಯ ಮೇಲೆ ವಿಶ್ವಾಸ ಇದೆ. ಆದರೂ, ಇಲ್ಲದ ಆಸ್ತಿ ಕುರಿತು ಏಕೆ ಪ್ರಚಾರವಾಗುತ್ತಿದೆ ಗೊತ್ತಿಲ್ಲವೆಂದು ಹೇಳಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನನ್ನ ರಾಜೀನಾಮೆ ಬಯಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಆದರೆ, ಈವರೆಗೂ ರಾಜೀನಾಮೆ ಕೇಳಿಲ್ಲ, ಕೇಳುವುದು ಇಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :