ವೃದ್ಧನೊಬ್ಬನಲ್ಲಿ ಕೊರೊನಾ ವೈರಸ್ ಪಾಸಿಟಿವ್ ಆಗಿರುವುದು ಬಯಲಾಗಿದ್ದೇ ತಡ, ಆ ಏರಿಯಾದ ನೂರಾರು ಜನರು ಮನೆಗಳನ್ನು ಬಿಟ್ಟು ಹೋಗಿದ್ದಾರೆ. ಕೊಪ್ಪಳದ ಕುರುಬರ ನಗರದಲ್ಲಿನ 66 ವರ್ಷದ ವೃದ್ಧನಿಗೆ ಕೊರೊನಾ ಕಾಣಿಸಿಕೊಂಡಿದೆ. ಹೀಗಾಗಿ ಕುರುಬರ ಓಣಿಯ ಜನರು ಬೆಳಗಾಗುವುದರೊಳಗಾಗಿ ತಮ್ಮ ಮನೆಗಳನ್ನು ತೊರೆದು ಬೇರೆ ಬೇರೆ ಕಡೆಗಳಲ್ಲಿ ಹೋಗಿ ವಾಸಿಸುವುದಕ್ಕೆ ಮುಂದಾಗಿದ್ದಾರೆ. ಬಹುತೇಕ ಮನೆಗಳಿಗೆ ಬೀಗ ಹಾಕಲಾಗಿದ್ದು, ಸಂಬಂಧಿಕರ ಮನೆಗಳು, ತೋಟದ ಮನೆಗಳು ಸೇರಿದಂತೆ ಹಲವೆಡೆ ಹೋಗಿ ತಾತ್ಕಾಲಿಕವಾಗಿ ಹೊಸ ನೆಲೆ