ಶಾಸಕರೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದಾಗಿ ಅಭಿಮಾನಿಯೊಬ್ಬ ಉಪವಾಸ ಮಾಡುತ್ತಿದ್ದಾನೆ. ಯಾದಗಿರಿ ಮತಕ್ಷೇತ್ರದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರಲ್ಲಿ ಕೋವಿಡ್ -19 ಪತ್ತೆಯಾಗಿದೆ. ಕೊರೊನಾ ದೃಢಪಟ್ಟಿರುವ ಕಾರಣದಿಂದ ಶಾಸಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ನಡುವೆ ತಮ್ಮ ನಾಯಕ ಶೀಘ್ರ ಗುಣಮುಖರಾಗಲೆಂದು ಭೀಮು ಪೂಜಾರಿ ಎಂಬಾತ ಐದು ದಿವಸ ಊಟ ಮಾಡೋದನ್ನು ಬಿಟ್ಟು ಉಪವಾಸ ಕೈಗೊಂಡಿದ್ದಾನೆ.