ಟಿಪ್ಪು ಸುಲ್ತಾನ್ ಜಯಂತಿ ಎಂದರೆ ಹುಲಿಗಳ ಜಯಂತಿ. ಅದಕ್ಕಾಗಿಯೇ ಬಿ.ಎಸ್.ಯಡಿಯೂರಪ್ಪರಿಗೆ ಭಯ, ಹೆದರಿಕೆ ಇದೆ. ಹೀಗಂತ ರಾಜ್ಯ ಟಿಪ್ಪು ಸುಲ್ತಾನ್ ವೇದಿಕೆ ಅಧ್ಯಕ್ಷ ಖಾಸಿಂ ಅಲಿ ವ್ಯಂಗ್ಯವಾಡಿದ್ದಾರೆ. ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ. ಸೂರ್ಯ-ಚಂದ್ರ ಇರೋವರೆಗೆ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಿಯೇ ತೀರುತ್ತೇವೆ ಅಂತ ಸವಾಲು ಹಾಕಿದ್ದಾರೆ. ಬಿ.ಎಸ್.ಯಡಿಯೂರಪ್ಪ ಒಬ್ಬ ಭ್ರಷ್ಟ ರಾಜಕಾರಣಿ. ಜಾತಿಗಳ ನಡುವೆ ದ್ವೇಷದ ಬೀಜ ಬಿತ್ತುತ್ತಾರೆ ಎಂದು ಆರೋಪ