ಕೊರೊನಾದಿಂದಾಗಿ ಘೋಷಣೆ ಮಾಡಿರುವ ಮೆಡಿಕಲ್ ಎಮರ್ಜೆನ್ಸಿ ಝೋನ್ ಗೆ ಪಶ್ಚಿಮ ವಲಯ ಐಜಿಪಿ ಭೇಟಿ ನೀಡಿದ್ದಾರೆ. ಪಶ್ಚಿಮ ವಲಯ ಐಜಿಪಿ ದೇವ್ಜ್ಯೋತಿ ರಾಯ್ ಉತ್ತರಕನ್ನಡ ಜಿಲ್ಲೆಯ ಭಟ್ಕಳಕ್ಕೆ ಭೇಟಿ ನೀಡಿ ಪೋಲಿಸ್ ಇಲಾಖೆಯಿಂದ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಉತ್ತರಕನ್ನಡ ಜಿಲ್ಲೆಯಲ್ಲಿ ದೃಢಪಟ್ಟ ಎಲ್ಲಾ ಒಂಭತ್ತು ಕೊರೊನಾ ಸೋಂಕು ಪ್ರಕರಣ ಭಟ್ಕಳದಲ್ಲಿಯೇ ಕಂಡು ಬಂದಿದೆ. ಭಟ್ಕಳಕ್ಕೆ ಸಿಮೀತಗೊಳಿಸಿ ಈಗಾಗಲೇ ಜಿಲ್ಲಾಡಳಿತ ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ, ಅತ್ಯಂತ ಕಟ್ಟುನಿಟ್ಟಾಗಿ ನಿಷೇಧಾಜ್ಞೆ