ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವ ದಂಧೆಯಲ್ಲಿ ತೊಡಗಿರುವವರನ್ನು ಗುರುತಿಸಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು, ಚಿತ್ತಾಪುರ ತಾಲೂಕಿನ ಮುಡಬೂಳ ಬ್ಯಾರೇಜ್ ಹತ್ತಿರ ಕಾಗೀನಾ ನದಿಯಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವುದನ್ನು ಪರಿಶೀಲಿಸಿ ಮಾತನಾಡಿದರು. ಅಕ್ರಮವಾಗಿ ಮರಳು ಸಾಗಿಸಲು ಮುಖ್ಯ ರಸ್ತೆಯಿಂದ ನದಿಯ ದಡದವರೆಗೆ ನಿರ್ಮಿಸಿರುವ ರಸ್ತೆಯಲ್ಲಿ ದನಕರುಗಳು ಕುಡಿಯುವ ನೀರಿಗೆ ಹೋಗಲು ತೊಂದರೆಯಾಗದಂತೆ ವಾಹನಗಳು ಬರದಂತೆ ಎಲ್ಲ ಸಂಪರ್ಕ ರಸ್ತೆಗಳಿಗೆ