ಐಎಂಎ ವಂಚನೆ ಪ್ರಕರಣ; ವಂಚಕ ಮನ್ಸೂರ್ ಅಲಿ ಖಾನ್ ಗೆ ಸಚಿವ ಜಮೀರ್ ಅಹ್ಮದ್ ರಿಂದ ಸಂದೇಶ

ಬೆಂಗಳೂರು, ಬುಧವಾರ, 12 ಜೂನ್ 2019 (11:49 IST)

ಬೆಂಗಳೂರು : ಹೂಡಿಕೆದಾರರಿಗೆ ಬೆಂಗಳೂರಿನ ಶಿವಾಜಿನಗರದ ಐಎಂಎ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಂಚನೆ ಮಾಡಿದ ಮನ್ಸೂರ್ ಅಲಿ ಖಾನ್ ಗೆ ಸಚಿವ ಜಮೀರ್ ಅಹ್ಮದ್ ಖಾನ್ ಸಂದೇಶವೊಂದನ್ನು ನೀಡಿದ್ದಾರೆ.
“ಮನ್ಸೂರ್ ಅಲಿ ಖಾನ್ ಎಲ್ಲಿದ್ದೀರಾ ಬನ್ನಿ. ಬಡವರ ಹಣ ವಾಪಾಸ್ ನೀಡಿ ಪುಣ್ಯ ಕಟ್ಕೋಳ್ಳಿ, ನಾನು ನಿಮ್ಮ ಜೊತೆಗಿದ್ದೇವೆ, ಯಾರಿಗೂ ಹೆದರಬೇಡಿ. ನಿಮ್ಮ ಮಾತಿನಲ್ಲಿ ಸತ್ಯ ಇದ್ದರೆ ಬನ್ನಿ ಕೂತು ಮಾತಾಡೋಣ. ನಿಮ್ಮ ಕೈಯಿಂದ ಯಾರು ಹಣ ತಗೊಂಡಿದ್ದಾರೆ ಅಂತಾ ಹೇಳಿ. ಯಾವ ಅಧಿಕಾರಿಗಳಿಗೆ , ಯಾವ ರಾಜಕಾರಣಿಗಳಿಗೆ ಹಣ ನೀಡಿದ್ದೀರಿ? ಎಲ್ಲಾ ಮಾಹಿತಿಯನ್ನು ಭಯವಿಲ್ಲದೆ ಹೇಳಿ. ವಾಪಸ್ ಪಡೆಯೋಣ” ಎಂದು ಸಚಿವ ಜಮೀರ್ ಅಹ್ಮದ್ ಖಾನ್, ಮನ್ಸೂರ್ ಅಲಿ ಖಾನ್ ಗೆ ನೀಡಿದ್ದಾರೆ.


ಶಿವಾಜಿನಗರದ ಐಎಂಎ ವಂಚನೆ ಪ್ರಕರಣದಲ್ಲಿ ಸಾವಿರಾರೂ ಕೊಟಿ ರೂ. ವಂಚನೆ ಮಾಡಿ ಮನ್ಸೂರ್ ಅಲಿ ಖಾನ್ ನಾಪತ್ತೆಯಾಗಿದ್ದು, ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್ ಐಟಿಗೆ ವಹಿಸಿದೆ. ಅಲ್ಲದೇ ಮನ್ಸೂರ್ ಅಲಿ ಖಾನ್ ಜತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನಂಟು ಇದೆ ಎನ್ನುವ ಸ್ಫೋಟ ಮಾಹಿತಿ ಬೆಳಕಿಗೆ ಬಂದಿತ್ತು.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೈ ಎಲೆಕ್ಷನ್ ಗೆಲುವಿನ ರೂವಾರಿ ಡಿಕೆಶಿಗೆ ಅಭಿನಂದನೆ

ರಾಜ್ಯದ ಗಮನ ಸೆಳೆದಿದ್ದ ಬೈ ಎಲೆಕ್ಷನ್ ನಲ್ಲಿ ಗೆಲುವಿನ ನಗೆ ಬೀರಲು ಕಾರಣರಾದ ಸಚಿವ ಡಿಕೆ ಶಿವಕುಮಾರ್ ಗೆ ...

news

ಸರಕಾರದ ಅಭದ್ರತೆ ಬಗ್ಗೆ ಅಧಿಕಾರಿಗಳು ಚರ್ಚೆ ಮಾಡಬೇಡಿ ಎಂದ ಡಿಸಿಎಂ

ರಾಜ್ಯ ಸರಕಾರ ಅಭದ್ರವಾಗಿದೆ ಎಂದು ಅಧಿಕಾರಿಗಳು ತಮಾಷೆಯಾಗಿಯೂ ಸಹ ಚರ್ಚೆ ಮಾಡಬಾರದು. ಹೀಗಂತ ಡಿಸಿಎಂ ...

news

ಎಲ್ಲ ರಸ್ತೆಗಳಲ್ಲೂ ಟೋಲ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು : ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ 1,117 ಕಿ.ಮೀ. ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ...

news

ಗ್ರಾಮ ವಾಸ್ತವ್ಯಕ್ಕೆ ತೆರಳಲು ರೈಲಿನಲ್ಲಿ ಪ್ರಯಾಣ ಬೆಳೆಸಲು ಸಿಎಂ ನಿರ್ಧಾರ

ಬೆಂಗಳೂರು : ಗ್ರಾಮಗಳಲ್ಲಿನ ಜನರ ಕಷ್ಟ ಆಲಿಸಲು ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಹೂಡುವ ನಿರ್ಧಾರ ...