ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣ: ರಾಜಕಾರಣಿಗಳು ಶಾಮೀಲು

ಬೆಂಗಳೂರು, ಮಂಗಳವಾರ, 11 ಜೂನ್ 2019 (13:56 IST)

ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣದಲ್ಲಿ ರಾಜಕಾರಣಿಗಳು ಶಾಮೀಲಾಗಿರುವ ಆರೋಪ ಕೇಳಿಬಂದಿದೆ.

ಕಂಪೆನಿ ಜೊತೆ ರಾಜಕಾರಣಿಗಳ ಹೆಸರನ್ನು ಬಿತ್ತರಿಸಲಾಗಿದೆ. ಮೇಲ್ಮನೆ ಸದಸ್ಯ ರಘು ಆಚಾರ್ ಈ ಕುರಿತು ಶಾಸಕರ ಭವನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ರಾಜಕಾರಣಿಗಳು ಅಂದರೆ ಪ್ರೋಗ್ರಾಮ್ ಗಳಿಗೆ ಹೋಗಬೇಕಾಗುತ್ತದೆ. ರಾಜಕಾರಣಿಗಳ ಬಗ್ಗೆ ತಪ್ಪು ಸಂದೇಶ ಜ‌ನರಿಗೆ ಬರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಸುಮಾರು ಜನ ಈ ಕಂಪೆನಿಯಲ್ಲಿ ಹಣ ಕಳೆದುಕೊಂಡಿದ್ದಾರೆ.
ಗೃಹಮಂತ್ರಿಗಳು ತನಿಖೆ ನಡೆಸುತ್ತೇವೆ ಎಂದಿದ್ದಾರೆ.

ಇಷ್ಟು ದಿನ ನಮ್ಮ ಇನ್ವೆಸ್ಟಿಗೇಷನ್ ಡಿಪಾರ್ಟಮೆಂಟ್ ಹಾಗೂ ಪೊಲೀಸ್ ಇಲಾಖೆ ಏನು ಮಾಡುತ್ತಿತ್ತು? ರಾಜಕಾರಣಿಗಳು ಇದರಲ್ಲಿ ತಳಕುಹಾಕಿಕೊಂಡಿರುವುದರಿಂದ ಸಿಬಿಐ ತನಿಖೆಗೆ ಇದನ್ನು ಒಪ್ಪಿಸಬೇಕು. ವಿರೋಧ ಪಕ್ಷ‌ಕೂಡ ಇದರಲ್ಲಿ ಕೈಜೋಡಿಸಬೇಕು ಎಂದು ಆಗ್ರಹ ಮಾಡಿದರು.

ಬಲಿಷ್ಠರು ತಪ್ಪಿಸಿಕೊಂಡು ಅಮಾಯಕರು ಇಂತಹ ಪ್ರಕರಣಗಳಲ್ಲಿ ಸಿಲುಕು ಹಾಕಿಕೊಳ್ಳುತ್ತಿದ್ದಾರೆ. ಸಿ ಎಲ್ ಪಿ ನಾಯಕರು, ಸಿಎಂ, ಡಿಸಿಎಂ ವಿರೋಧ ಪಕ್ಷದವರನ್ನು ಒಲಿಸಿ ಸಿಬಿಐ ತನಿಖೆಗೆ ಒಪ್ಪಿಸಬೇಕು. ಸ್ಥಳೀಯ ಪೊಲೀಸರಿಗೆ ಇಂಟಲ್ಜೆನ್ಸಿಗೆ ಇದು ಗೊತ್ತಿರಲಿಲ್ಲಾ? ಸ್ಥಳೀಯ ಪೊಲೀಸರನ್ನು ಆದಷ್ಟು ಬೇಗ ಅಮಾನತ್ತುಗೊಳಿಸಬೇಕು ಎಂದು ರಘು ಆಚಾರ್ ಒತ್ತಾಯ ಮಾಡಿದ್ರು.


ಇಲ್ಲಿ ಯಾವ ಸರ್ಕಾರ ಎನ್ನುವ ಪ್ರಶ್ನೆಯಲ್ಲ. ಗ್ರಾಮವಾಸ್ತವ್ಯ ಮಾಡಿ ಹಳ್ಳಿಗಳ ಸುಧಾರಣೆ ಮಾಡಲು ಸಿಎಂ ಹೊರಟಿದ್ದಾರಲ್ಲ. ಅವರು ಬೆಂಗಳೂರನ್ನು ಸರಿಪಡಿಸಲಿ ಮೊದಲು ಎಂದು ರಘು ಆಚಾರ್ ಕಿಡಿಕಾರಿದ್ದಾರೆ.
 





ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿಗೆ ದೂರು ನೀಡಿದ ಜೆಡಿಎಸ್ ವರಿಷ್ಠ

ಬೆಂಗಳೂರು : ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್- ಜೆಡಿಎಸ್ ನಡುವೆ ಗುದ್ದಾಟಗಳು ಶುರುವಾಗಿದ್ದು, ಇದೀಗ ...

news

ಸಿಎಂ ಗ್ರಾಮವಾಸ್ತವ್ಯದಿಂದ ಮೂರು ಕಾಸಿನ ಪ್ರಯೊಜನವಿಲ್ಲ-ಕೈ ಮುಖಂಡ ಕೆ.ಬಿ.ಚಂದ್ರಶೇಖರ್ ಕಿಡಿ

ಬೆಂಗಳೂರು : ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೈ ಮುಖಂಡ ...

news

ಸಚಿವ ಡಿ.ಸಿ.ತಮ್ಮಣ್ಣ ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ?

ಶಿವಮೊಗ್ಗ : ಇತ್ತೀಚೆಗೆ ಮಂಡ್ಯದಲ್ಲಿ ರಸ್ತೆ ಅಭಿವೃದ್ಧಿಯ ಬಗ್ಗೆ ಮನವಿ ಮಾಡಿದ ಗ್ರಾಮಸ್ಥರ ವಿರುದ್ಧ ...

news

ಸಾಲಮನ್ನಾ ಯೋಜನೆಯಲ್ಲಿ ರೈತರಿಗೆ ರಾಜ್ಯ ಸರ್ಕಾರದಿಂದ ಮೋಸ

ಬೆಂಗಳೂರು : ಅನ್ನದಾತರಿಗೆ ಸಾಲಮನ್ನಾ ಆಸೆ ತೋರಿಸಿ ರಾಜ್ಯ ಸರ್ಕಾರದಿಂದ ಮೋಸ ಮಾಡಿದೆ ಎಂಬ ಆರೋಪ ...