ಬೆಂಗಳೂರು : ರಾಜ್ಯದಲ್ಲಿ ಸಚಿವರ ಖಾತೆ ಮರುಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಖಾತೆ ಮರುಹಂಚಿಕೆಯಾಗುತ್ತಿದ್ದಂತೆ ವಲಸಿಗ ಸಚಿವರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಡಾ.ಕೆ.ಸುಧಾಕರ್ ನಿವಾಸಕ್ಕೆ ವಲಸಿಗ ಸಚಿವರು ಆಗಮಿಸಿದ್ದಾರೆ. ಕೆ.ಗೋಪಾಲಯ್ಯ, ಎಂಟಿಬಿ ನಾಗರಾಜ್ ಸೇರಿ ಕೆಲವು ಸಚಿವರು ಆಗಮಿಸಿ ಕೆಲವು ಗಂಟೆಗಳಿಂದ ಚರ್ಚೆ ನಡೆಸುತ್ತಿದ್ದಾರೆ. ಖಾತೆ ಹಂಚಿಕೆ ಬಗ್ಗೆ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಹಾಗೇ ಸಚಿವ ನಾರಾಯಣ ಗೌಡರು ಬೇಸರಗೊಂಡಿದ್ದು ದೂವಾಣಿ ಮೂಲಕ ಸುಧಾಕರ್ ಗೆ ಕರೆ ಮಾಡಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.ಬಿಜೆಪಿ