ಬೆಂಗಳೂರು : ಪಿಯುಸಿ ಪರೀಕ್ಷೆಗೆ ಸರ್ಕಾರ ಹೊಸ ಅಂಕ ಮಾದರಿ ಜಾರಿಗೊಳಿಸಿದೆ. 2023-24ನೇ ಸಾಲಿನ ವರ್ಷದಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಇನ್ನು ಮುಂದೆ 20 ಆಂತರಿಕ ಅಂಕ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಭಾಷಾ ವಿಷಯಗಳು ಮತ್ತು ಕೋರ್ ಸಬ್ಜೆಕ್ಟ್ಗಳಿಗೆ ಈ ನಿಯಮ ಅನ್ವಯ ಆಗಲಿದೆ.ಇಷ್ಟು ದಿನ ವಿಜ್ಞಾನ ವಿಷಯಗಳಿಗೆ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿತ್ತು. 70 ಅಂಕಕ್ಕೆ ಥಿಯರಿ ಇತ್ತು.